ಶಿಕ್ಷಕರ ಮಾಹಿತಿ

Friday, July 24, 2020

ವೃತ್ತಿ ಕೌಸಲ್ಯ

               ವೃತ್ತಿ ಕೌಸಲ್ಯ ಎಂಬುವುದು ಇವತ್ತಿನ ಶಿಕ್ಷಕರಿಗೆ ತುಂಬಾ ಅನೂಕೂಲಕಾರಿಯಾದದ್ದು.ಏಕೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ನಾವು ಇರುವುದರಿಂದ ನಮ್ಮ ಹಳೆಯ ಭೋಧನಾ ಪದ್ದತಿಯನ್ನು ಬದಲಾಯಿಸಿ ನಮ್ಮ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.
               ವೃತ್ತಿ ಕೌಶಲ್ಯವು ಕಲಿಕೆಯ ಸ್ವರೂಪ ಮತ್ತು ಸಾಮರ್ಥ್ಯ ಅಭಿವೃದ್ಧಿಪಡಿಸಿ ಶಿಕ್ಷಣದ ಅಭಿವೃದ್ಧಿಗೆ ಇದು 
ಸಹಕಾರಿಯಾಗಿದೆ.ಶಿಕ್ಷಣ ತಜ್ಞರು, ಇವತ್ತಿನ ವಿದ್ಯನ್ಮಾನ ಸಮಾಜದಲ್ಲಿ ಯಶಸ್ಸಿನ ತಯಾರಿಯಲ್ಲಿ ಶಿಕ್ಷಕರು ವಿವಿಧ  ವೃತ್ತಿ ಕೌಶಲ್ಯ ಅಳವಡಿಸಿಕೊಂಡು ಪ್ರಾವೀಣ್ಯತೆ ಮತ್ತು ಕೌಶಲ್ಯ ಆಧರಿಸಿ ಭೋದನೆ ಮಾಡಿದರೆ ಭೋಧನಾ ಪದ್ಧತಿ ಉತ್ತಮಗೊಳ್ಳುವುದು ಹಾಗೂ ಸಾಂಪ್ರದಾಯಿಕ ಭೋಧನೆ ಬಿಟ್ಟ ನಾವೀಣ್ಯ ಮಾದರಿಯ ಭೋದನೆ ಅಳವಡಿಸಿಕೊಂಡು ಕಲಿಕೆ ಗಟ್ಟಿಗೊಳಿಸಬಹುದಾಗಿದೆ.
              21 ಶತಮಾನವು ಸಮಾಜದ ಬದಲಾವಣೆ ಮತ್ತು 
ತಂತ್ರಜ್ಞಾನದಲ್ಲಿ ತನ್ನದೆ ಆದ ವೇಗ ಪಡೆದುಕೊಂಡಿದೆ.ಶಿಕ್ಷಣ 
ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಾಗ ಮತ್ತು
ವಿದ್ಯಾರ್ಥಿಗಳ ಆಶೆ ಮತ್ತು ಆಕಾಂಕ್ಷೆ ಇಡೇರಿಸುವಾಗ ತುಂಬಾ ಅನೂಕೂಲಕಾರಿಯಾಗಲಿದೆ.1980 ದಶಕದ ನಂತರ ಸರ್ಕಾರ ಶಿಕ್ಷಣ ತಜ್ಞರು, ಸಂಶೋಧನೆಗಳು ವಿದ್ಯಾರ್ಥಿಗ ಕಲಿಕೆ ಗಟ್ಟಿಗೊಳಿಸುವಲ್ಲಿ ಮತ್ತು ಕಲಿಕೆ ಪರಿಣಾಮಕಾರಿ ಆಗುವಲ್ಲಿ ಅನೇಕ ವೃತ್ತಿ ಕೌಶಲ್ಯಗಳ ಪರಿಚಯ ಮಾಡಿದರು.ಇವತ್ತು 
ಅಮೇರಿಕಾ,ಜಪಾನ,ಜರ್ಮನಿ,ಇಂಗ್ಲೆಂಡ್ ದೇಶದಲ್ಲಿ ಆಗಿರುವ ಕಲಿಕಾ ಸಂಶೋಧನೆಗಳನ್ನು ನಮ್ಮ ವೃತ್ತಿಪರ ಕೌಶಲ್ಯದಲ್ಲಿ ನಾವು ಅಳವಡಿಸಿಕೊಂಡಿದ್ದೇವೆ.ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ
ಅಪಾರ ಪ್ರಮಾಣದ ಬದಲಾವಣೆ ಕಂಡಿದ್ದೇವೆ.
               ವಿದ್ಯುನ್ಮಾನ ಸಾಕ್ಷರತೆಯ ಮೇಲೆ  ಕೇಂದ್ರಿಕರಿಸುವ
ನಿರ್ದಿಷ್ಟ ವೃತ್ತಿಪರ ಕೌಶಲ್ಯಗಳು ಪ್ರಸ್ತುತ ದಿನಮಾನದಲ್ಲಿ ನಮ್ಮ ಸಮಾಜಕ್ಕೆ ಅವಶ್ಯಕತೆ ಇದೆ.ಪರಸ್ಪರ ಸಹಯೋಗ,
ವಿಭಿನ್ನಮುಖ ಭೋದನಾ ವಿಧಾನ ಪ್ರತಿ ಶಿಕ್ಷಕರ ಕಾರ್ಯ
ಕೌಶಲ್ಯ ಹೆಚ್ಚಿಸಿದೆ. ವೃತ್ತಿಪರ ಕೌಶಲ್ಯದ ಮೂರು ಆಯಾಮ
ಗಳ ಪರಿಚಯ ಮಾಡಿಕೊಳ್ಳೊಣ
1.ಕಲಿಕೆ ಮತ್ತು ನಾವೀನ್ಯತೆ ಕೌಶಲ್ಯಗಳು:- ಇದು ಸಮಸ್ಯೆ ಪರಿಹಾರ,ಸಂವಹನ,ಸಹಯೋಗ ಮತ್ತು ಸೃಜನಶೀಲತೆ ಹೆಚ್ಚಿಸುತ್ತದೆ
2.ವಿದ್ಯನ್ಮಾನ ಸಾಕ್ಷರತಾ ಕೌಶಲ್ಯಗಳು:-ಮಾಹಿತಿ,ಸಾಕ್ಷರತೆ, ಮಾಹಿತಿ ಸಂವಹನ,ತಂತ್ರಜ್ಞಾನ,ICT ಬಗ್ಗೆ ವೃತ್ತಿ ಕೌಶಲ್ಯ ಹೆಚ್ಚಿಸುತ್ತದೆ
3.ವೃತ್ತಿ ಜೀವನದ ಕೌಶಲ್ಯಗಳು:-ನಮ್ಯತೆ,ಹೊಂದಾಣಿಕೆ,ಸ್ವಯಂ ನಿರ್ದೇಶನ,ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನ
                 ಸಾಮಾನ್ಯವಾಗಿ ವೃತ್ತಿಪರ ಕೌಶಲ್ಯಗಳು ವೈವಿಧ್ಯಮಯವಾಗಿವೆ.ಆದರೆ ಕೆಲವು ಸಾಮಾನ್ಯ ವಿಷಯ
ಗಳನ್ನು ಹಂಚಿಕೊಳ್ಳುತ್ತದೆ.ಪರಿಣಾಮಕಾರಿ ಕಲಿಕೆ ಮತ್ತು 
ಆಳವಾದ ಕಲಿಕೆ ಹಾಗೂ ಶೈಕ್ಷಣಿಕ ವಿಷಯ ಸ್ವಾಧೀನ
ಪಡಿಸಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಿದೆ.
 

No comments:

Post a Comment

ಮೌರ್ಯರ ಆಡಳಿತ